ಯೋಗ್ಯತಾಪತ್ರಗಳು ಮತ್ತು ಬಹುಮಾನಗಳು

ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಸಭೆಯ ವತಿಯಿಂದ ಯೋಗ್ಯತಾಪತ್ರಗಳನ್ನು ನೀಡಲಾಗುವುದು. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪರಮಪೂಜ್ಯ ಶ್ರೀ ಶ್ರೀ ಜಗದ್ಗುರುಗಳವರು ಆಶೀರ್ವಾದ ಅನುಗ್ರಹಗಳೊಡನೆ ಕಳುಹಿಸುವ ಶೃಂಗೇರಿ ಶ್ರೀ ಶಾರದಾಂಕಿತ ರಜತ ಪದಕಗಳನ್ನು ಈ ಕೆಳಕಂಡಂತೆ ಕೊಡಲಾಗುವುದು.
1. ಪ್ರಥಮಾ ಪರೀಕ್ಷೆಯಲ್ಲಿ ವೊದಲ ಹತ್ತು ಸ್ಥಾನಗಳು
2. ದ್ವಿತೀಯಾ ಪರೀಕ್ಷೆಯಲ್ಲಿ ವೊದಲ ಹತ್ತು ಸ್ಥಾನಗಳು
3. ತೃತೀಯಾ ಪರೀಕ್ಷೆಯಲ್ಲಿ ವೊದಲ ಎಂಟು ಸ್ಥಾನಗಳು
4. ತುರೀಯಾ ಪರೀಕ್ಷೆಯಲ್ಲಿ ವೊದಲ ಐದು ಸ್ಥಾನಗಳು
5. ಪ್ರವೇಶ ಪರೀಕ್ಷೆಯಲ್ಲಿ ವೊದಲ ಮೂರು ಸ್ಥಾನಗಳು

ಕಳೆದು ಹೋದ ಯೋಗ್ಯತಾ ಪತ್ರವನ್ನು ಪುನಃ ಪಡೆಯಬೇಕಾದವರು ೨೦ ರೂ. ಶುಲ್ಕದೊಡನೆ ಹೆಸರು, ರಿ.ನಂ, ಪರೀಕ್ಷೆಯ ಹೆಸರು, ನಡೆದ ತಾರೀಖು ಮತ್ತು ಕೇಂದ್ರ-ಈ ವಿವರವುಳ್ಳ ಪ್ರಾರ್ಥನಾ ಪತ್ರವನ್ನು ಸಭೆಗೆ ಕಳಿಸಬೇಕು.

Comments are closed.