ಪ್ರಕಟಣೆಗಳು

ಸಂಸ್ಕೃತ ಪರೀಕ್ಷೆಗಳ ಪಠ್ಯಪುಸ್ತಕಗಳಲ್ಲದೆ ಸುರಸರಸ್ವತೀ ಸಭೆಯು ಶಂಕರ ಕೃಪಾ ಎಂಬ ಕನ್ನಡ ಮಾಸಿಕ ಪತ್ರಿಕೆಯನ್ನೂ ಪ್ರಕಟಿಸುತ್ತಿದೆ. ಶಂಕರ ಕೃಪಾ ಎಂಬುದು ಆಧ್ಯಾತ್ಮಿಕ ಮಾಸಪತ್ರಿಕೆ. ಇದರಲ್ಲಿ ಜಗದ್ಗುರುಗಳ ಭಾಷಣಗಳು, ವಿವಿಧ ಶಾಸ್ತ್ರ ಮತ್ತು ಧರ್ಮಸಂಬದ್ಧ ಲೇಖನಗಳು, ಸಂಸ್ಕೃತ ಶಾಸ್ತ್ರಗ್ರಂಥಗಳನ್ನು ಆಧರಿಸಿದ ಲೇಖನಗಳು, ಭಕ್ತಿಪ್ರಧಾನ ಲೇಖನಗಳು ಮುಂತಾದವನ್ನು ಕಾಣಬಹುದು.

ಗ್ರಾಹಕಧನ
೧ ವರ್ಷಕ್ಕೆ – ರೂ ೫೦/-
೨ ವರ್ಷಗಳಿಗೆ – ರೂ ೧೦೦/-
೫ ವರ್ಷಗಳಿಗೆ – ರೂ ೨೫೦/-
೧೦ ವರ್ಷಗಳಿಗೆ – ರೂ ೫೦೦/-

ಗ್ರಾಹಕತ್ವ ಪಡೆಯಲು ಬಯಸುವವರು ಚೆಕ್/ಡಿಮಾಂಡ್ ಡ್ರಾಫ಼್ಟ್‌ನ ಮೂಲಕ ಹಣವನ್ನು ಈ ಕೆಳಗಿನ ವಿವರಗಳೊಂದಿಗೆ ‘ಕಾರ್ಯದರ್ಶಿಗಳು, ಶ್ರೀ ಸುರಸರಸ್ವತೀ ಸಭೆ’ ಎಂಬ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಕಳಿಸಬಹುದು.

ಗ್ರಾಹಕರ ಹೆಸರು –
ವಿಳಾಸ –
ಗ್ರಾಹಕತ್ವದ ಅವಧಿ –
ಡಿಡಿ/ಚೆಕ್ ಸಂಖ್ಯೆ ಮತ್ತು ದಿನಾಂಕ –
ಮೊತ್ತ –

ಹೆಚ್ಚಿನ ವಿವರಗಳಿಗಾಗಿ ಶ್ರೀ ಎಂ ಎ ವೆಂಕಟೇಶ ಭಟ್ಟರನ್ನು ಸಂಪರ್ಕಿಸಬಹುದು
ದೂರವಾಣಿ – ೯೪೪೮೫೦೫೮೮೪
ಈಮೈಲ್ – [email protected]

ಇತರ ಪ್ರಕಟಣೆಗಳು
ತತ್ತ್ವಾಲೋಕ – ಶೃಂಗೇರಿ ಶಾರದಾಪೀಠದಿಂದ ಪ್ರಕಟವಾಗುವ ಹಿಂದೂ ಧಾರ್ಮಿಕ ಮಾಸಪತ್ರಿಕೆ.

Comments are closed.