ದ್ವಿತೀಯಾ

ಇದು ಸರಳ ಸಂಸ್ಕೃತ ಪರೀಕ್ಷೆಗಳ ಎರಡನೆಯ ಹಂತ.

 ದ್ವಿತೀಯಾ ಪರೀಕ್ಷೆಯ ಇ-ಕಲಿಕೆಗಾಗಿ ಇಲ್ಲಿ ನೋಡಿ – ಸಂಪೂರ್ಣ ಪಠ್ಯಕ್ರಮವು ಧ್ವನಿ-ಚಿತ್ರ-ಚಲನಚಿತ್ರಗಳೊಡನೆ, ಉತ್ತರಸಹಿತ ಅಭ್ಯಾಸಗಳೊಡನೆ, ಇನ್ನೂ ಅನೇಕ ಅಧ್ಯಯನಸಾಧನಗಳೊಡನೆ ಇಲ್ಲಿ ಲಭ್ಯ.

ಪಠ್ಯಪುಸ್ತಕ: ಸಂಸ್ಕೃತ ಭಾಷಾ ದೀಪಿಕಾ-I I (ಆಂಗ್ಲ ಮತ್ತು ಕನ್ನಡ ಆವೃತ್ತಿಗಳಲ್ಲಿ ಲಭ್ಯ)

ಬೆಲೆ: ೨೦.೦೦ ರೂ

ಈ ಪಠ್ಯಪುಸ್ತಕದಲ್ಲಿ ವಿದ್ಯಾರ್ಥಿಗಳಿಗೆ ಮತ್ತಷ್ಟು ನಾಮರೂಪಗಳು ಮತ್ತು ಧಾತುರೂಪಗಳನ್ನು ಪರಿಚಯಿಸಲಾಗುವುದು. ಪಠ್ಯಪುಸ್ತಕದ ಗದ್ಯಭಾಗದಲ್ಲಿ ಸರಳವಾದ ಲಘುಪಾಠಗಳಿವೆ. ಪದ್ಯಭಾಗದಲ್ಲಿ ಸುಭಾಷಿತಗಳನ್ನೂ, ರಾಮಾಯಣದ ಒಂದು ಭಾಗವನ್ನೂ ನೀಡಲಾಗಿದೆ. ವ್ಯಾಕರಣಭಾಗದಲ್ಲಿ ಇನ್ನೂ ಕೆಲವು ಸ್ವರಸಂಧಿಗಳು, ಅವ್ಯಯಗಳು, ಉಪಸರ್ಗಗಳು ಮತ್ತು ವಿವಿಧ ಲಕಾರಗಳ ವಿವರಣೆಯಿದೆ.

ಪರೀಕ್ಷಾಶುಲ್ಕ : ೨೦.೦೦

ಪರೀಕ್ಷೆಯ ಅವಧಿ: ೨.೩೦ ಗಂಟೆ (ಬೆ ೧೦.೦೦ ರಿಂದ ೧೨.೩೦)

ಅಂಕಗಳು: ೧೦೦ (ಕನಿಷ್ಠ ಅಂಕ – ೩೫)

ವಿದ್ಯಾರ್ಥಿಗಳು ದ್ವಿತೀಯಾಪರೀಕ್ಷೆಯಲ್ಲಿ ಸುಮಾರು ೭೫ ಅಂಕಗಳಿಗೆ ಸಂಸ್ಕೃತದಲ್ಲಿಯೇ ಉತ್ತರಿಸಬೇಕು. ಇನ್ನುಳಿದ  ಅಂಕಗಳಿಗೆ ಸಂಸ್ಕೃತ, ಕನ್ನಡ ಅಥವಾ ಆಂಗ್ಲಭಾಷೆಯಲ್ಲಿ ಉತ್ತರಿಸಬಹುದು.

 ದ್ವಿತೀಯಾಪರೀಕ್ಷೆಯ ಆವೇದನಾಪತ್ರವನ್ನು ಇಲ್ಲಿ ನೋಡಿ 

 

Comments are closed.