ಆವೇದನಾಪತ್ರ ಸಲ್ಲಿಕೆ

  1. ಆವೇದನಾ ಪತ್ರಿಕೆಗಳು ಒಂದೊಂದು ಪರೀಕ್ಷೆಗೂ ಬೇರೆ ಬೇರೆ ನಿಯತವಾಗಿವೆ. ಆಯಾ ಪತ್ರಿಕೆಗಳನ್ನೇ ತರಿಸಿಕೊಂಡು ಎಲ್ಲ ಕಾಲಂಗಳನ್ನು ಭರ್ತಿಮಾಡಿ ಕಳುಹಿಸಬೇಕು.
  2. ಅಭ್ಯರ್ಥಿಯ ಹೆಸರನ್ನು ದೇವನಾಗರಿ ಲಿಪಿ ಅಥವಾ ಕನ್ನಡದಲ್ಲಿಯೇ ಸ್ಫುಟವಾಗಿ ಬರೆದಿರಬೇಕು. ಆಂಗ್ಲ ಭಾಷೆಯಲ್ಲಿ ಬರೆದರೆ ಉಚ್ಚಾರಣಾ ವೈವಿಧ್ಯದಿಂದ ಯೋಗ್ಯತಾ ಪತ್ರವನ್ನು ಬರೆಯಲು ತೊಂದರೆಯಾಗುತ್ತದೆ. ಆದುದರಿಂದ ಬರೆಯಬಾರದು.
  3. ವಿದ್ಯಾರ್ಥಿಗಳು ಯಾವ ಭಾಷೆಯಿಂದ ಉತ್ತರಿಸುವುದು ಎಂಬುದನ್ನು ಸೂಚಿಸಬೇಕು.
  4. ಆವೇದನಾ ಪತ್ರಿಕೆಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ಬಳಸತಕ್ಕದ್ದು.
  5. ಆವೇದನಾ ಪತ್ರಗಳನ್ನು ಸಭೆಯಿಂದ ಮಾನಿತವಾದ ಯಾವುದಾದರೂ ಅಧ್ಯಯನಕೇಂದ್ರದ ಮೂಲಕವೇ ಕಳಿಸಬೇಕು. ವೈಯಕ್ತಿಕ ಆವೇದನಾಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
  6. ಪರೀಕ್ಷಾ ಶುಲ್ಕವನ್ನು ಆವೇದನಾ ಪತ್ರಗಳನ್ನು ಕಳುಹಿಸಿದ ನಂತರ, ಅದನ್ನು ಹಿಂದಕ್ಕೆ ಕೊಡುವುದಾಗಲೀ, ಮುಂದಿನ ಪರೀಕ್ಷೆಗೆ ಮೀಸಲಾಗಿರಿಸುವುದಾಗಲೀ, ಬೇರೆಯವರಿಗೆ ವರ್ಗಾಯಿಸುವುದಾಗಲೀ ಮಾಡಲಾಗುವುದಿಲ್ಲ.
  7. ಪರೀಕ್ಷಾ ಕೇಂದ್ರವನ್ನು ಬದಲಾಯಿಸಬೇಕಾದ ಅಗತ್ಯವಿದ್ದಲ್ಲಿ ಒಂದು ತಿಂಗಳು ಮುಂಚಿತವಾಗಿ ಕಾರ್ಯದರ್ಶಿಯವರಿಗೆ ಪತ್ರ ಮುಖೇನ ತಿಳಿಸಬೇಕು.
  8. ಆವೇದನಾ ಪತ್ರಗಳನ್ನು ಮತ್ತು ಶುಲ್ಕವನ್ನು ಕಳುಹಿಸಲು, ಸಾಮಾನ್ಯವಾಗಿ ಜನವರಿ ಪರೀಕ್ಷೆಗೆ ಹಿಂದಿನ ಡಿಸೆಂಬರ್ 10 ಮತ್ತು ಆಗಸ್ಟ್ ಪರೀಕ್ಷೆಗೆ ಹಿಂದಿನ ಜುಲೈ 10 ಕಡೆಯ ದಿನಗಳು. ಆನಂತರದ 10 ದಿನಗಳವರೆಗೆ ವಿಶೇಷ ಶುಲ್ಕ ಒಂದು ರೂ. ಜೊತೆ ಶುಲ್ಕವನ್ನು, ಆವೇದನಾ ಪತ್ರಗಳನ್ನು ಕಳುಹಿಸಬಹುದು. ಅನಂತರ ಬರುವ ಶುಲ್ಕ ಮತ್ತು ಆವೇದನಾ ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
  9. ಪರೀಕ್ಷಾ ಶುಲ್ಕದ ಒಟ್ಟು ಮೊತ್ತದಲ್ಲಿ ಶೇಕಡ ಮೂವತ್ತು ಅಂಶವನ್ನು ಉಪಾಧ್ಯಾಯರು ತೆಗೆದುಕೊಂಡು ಉಳಿದ ಹಣವನ್ನು ಬ್ಯಾಂಕ್ ಡ್ರಾಫ್ಟ್ ಅಥವಾ ಪೋಸ್ಟಲ್ ಅಡ್ರಸ್ ಮೂಲಕ “ಕಾರ್ಯದರ್ಶಿ, ಶ್ರೀ ಸುರಸರಸ್ವತೀ ಸಭಾ, ಶೃಂಗೇರಿ, ಶ್ರೀ ಅಭಿನವ ಮಂದಿರ, ಶ್ರೀ ಶಂಕರ ಮಠದ ಆವರಣ, ಶಂಕರಪುರಂ, ಬೆಂಗಳೂರು-560004”-ಈ ವಿಳಾಸಕ್ಕೆ ಕಳುಹಿಸಬೇಕು.

Comments are closed.