ತೃತೀಯಾ

ಇದು ಸರಳ ಸಂಸ್ಕೃತ ಪರೀಕ್ಷೆಗಳ ಮೂರನೆಯ ಹಂತ. ಈ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿರುತ್ತವೆ.
ತೃತೀಯಾ ಪರೀಕ್ಷೆಯ ಇ-ಕಲಿಕೆಗಾಗಿ ಇಲ್ಲಿ ನೋಡಿ – ಸಂಪೂರ್ಣ ಪಠ್ಯಕ್ರಮವು ಧ್ವನಿ-ಚಿತ್ರ-ಚಲನಚಿತ್ರಗಳೊಡನೆ, ಉತ್ತರಸಹಿತ ಅಭ್ಯಾಸಗಳೊಡನೆ, ಇನ್ನೂ ಅನೇಕ ಅಧ್ಯಯನಸಾಧನಗಳೊಡನೆ ಇಲ್ಲಿ ಲಭ್ಯ.
ಪತ್ರಿಕೆ ೧
ಪಠ್ಯಪುಸ್ತಕ: ಸಂಸ್ಕೃತ ಭಾಷಾ ದೀಪಿಕಾ-I I I (ಸಂಸ್ಕೃತದಲ್ಲಿ ಮಾತ್ರ)
ಬೆಲೆ: ೨೦.೦೦ ರೂ

ಪತ್ರಿಕೆ ಎರಡು
ಪಠ್ಯಪುಸ್ತಕ: ಅನುವಾದಪ್ರದೀಪ-I (ಆಂಗ್ಲ ಮತ್ತು ಕನ್ನಡ ಆವೃತ್ತಿಗಳಲ್ಲಿ ಲಭ್ಯ)
ಬೆಲೆ: ೧೫.೦೦ ರೂ

ಮೊದಲ ಪತ್ರಿಕೆಯ ಪಠ್ಯಪುಸ್ತಕದಲ್ಲಿ ನಾಮರೂಪಗಳು ಮತ್ತು ಧಾತುರೂಪಗಳ ಪ್ರೌಢಪ್ರಯೋಗಗಳನ್ನು ಉಳ್ಳ ಪಾಠಗಳಿವೆ. ಪದ್ಯಭಾಗದಲ್ಲಿ ಸುಭಾಷಿತಗಳು, ಕುಮಾರಸಂಭವ ಮತ್ತು ರಾಮೋದಂತಕಾವ್ಯಗಳ ಆಯ್ದ ಭಾಗಗಳಿವೆ. ವ್ಯಾಕರಣಭಾಗದಲ್ಲಿ ವ್ಯಂಜನ ಸಂಧಿಗಳು ಮತ್ತು ವಿಸರ್ಗಸಂಧಿಗಳನ್ನು ಪರಿಚಯಿಸಲಾಗಿದೆ.

ಎರಡನೆಯ ಪಠ್ಯಪುಸ್ತಕದಲ್ಲಿ ಅನುವಾದದ ಅಭ್ಯಾಸಗಳಿವೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಂಸ್ಕೃತದಿಂದ ಕನ್ನಡ/ಆಂಗ್ಲಕ್ಕೆ ಮತ್ತು ಕನ್ನಡ/ಆಂಗ್ಲದಿಂದ ಸಂಸ್ಕೃತಕ್ಕೆ ವಾಕ್ಯಗಳನ್ನು ಅನುವಾದಿಸುವ ಅಭ್ಯಾಸವಾಗುವುದು. ವಿವಿಧ ವಿಭಕ್ತಿಗಳು, ಅವ್ಯಯಗಳು, ವಿಶೇಷಣಗಳು, ಕೃದಂತಾವ್ಯಯಗಳು, ಸಂಖ್ಯೆಗಳು ಮುಂತಾದವನ್ನು ಒಳಗೊಂಡ ಅಭ್ಯಾಸಗಳನ್ನು ನೀಡಲಾಗಿದೆ. ಪ್ರಬಂಧಲೇಖನ ಮತ್ತು ಪತ್ರಲೇಖನಗಳು ಸಹ ಈ ಪತ್ರಿಕೆಯ ಭಾಗವಾಗಿವೆ.

ಪರೀಕ್ಷಾಶುಲ್ಕ : ೨೫.೦೦
ಪರೀಕ್ಷೆ ೧ರ ಅವಧಿ: ೩.೦೦ ಗಂಟೆ (ಬೆ ೧೦.೦೦ ರಿಂದ ೧.೦೦)
ಅಂಕಗಳು: ೧೦೦ (ಕನಿಷ್ಠ ಅಂಕ – ೩೫)
ಪರೀಕ್ಷೆ ೨ರ ಅವಧಿ: ೧.೩೦ ಗಂಟೆ (ಮ ೨.೩೦ ರಿಂದ ೪.೦೦)
ಅಂಕಗಳು: ೫೦ (ಕನಿಷ್ಠ ಅಂಕ – ೧೮)

ವಿದ್ಯಾರ್ಥಿಗಳು ತೃತೀಯಾಪರೀಕ್ಷೆಯಲ್ಲಿ ಸುಮಾರು ೭೫ ಅಂಕಗಳಿಗೆ ಸಂಸ್ಕೃತದಲ್ಲಿಯೇ ಉತ್ತರಿಸಬೇಕು. ಇನ್ನುಳಿದ ಅಂಕಗಳಿಗೆ ಸಂಸ್ಕೃತ, ಕನ್ನಡ ಅಥವಾ ಆಂಗ್ಲಭಾಷೆಯಲ್ಲಿ ಉತ್ತರಿಸಬಹುದು.

 ತೃತೀಯಾಪರೀಕ್ಷೆಯ ಆವೇದನಾಪತ್ರವನ್ನು ಇಲ್ಲಿ ನೋಡಿ 

Comments are closed.