ಧ್ಯೇಯೋದ್ದೇಶಗಳು

ಜನಸಾಮಾನ್ಯರಲ್ಲಿ ಸಂಸ್ಕೃತ ಭಾಷೆ ಮತ್ತು ಸಾಹಿತ್ಯದ ಪ್ರಸಾರವೇ ಸುರಸರಸ್ವತೀ ಸಭೆಯ ಧ್ಯೇಯ. ಕೆಳಕಂಡ ಕಾರ್ಯಗಳ ಮೂಲಕ ಸಭೆಯು ತನ್ನ ಲಕ್ಷ್ಯವನ್ನು ಸಾಧಿಸಲು ಪ್ರಯತ್ನಿಸುತ್ತಿದೆ –

  1. ವರ್ಷದಲ್ಲಿ ಎರಡು ಬಾರಿ ಐದು ಹಂತಗಳಲ್ಲಿ ಸರಳ ಸಂಸ್ಕೃತ ಪರೀಕ್ಷೆಗಳನ್ನು ನಡೆಸಲಾಗುವುದು. ಈ ಪರೀಕ್ಷೆಗಳನ್ನು ಯಾವುದೇ ಆಸಕ್ತ ವ್ಯಕ್ತಿಯು ವಯಸ್ಸು-ಲಿಂಗ-ವಿದ್ಯಾರ್ಹತೆ-ಜಾತಿ-ಸಮುದಾಯಗಳ ಯಾವುದೇ ಭೇದವಿಲ್ಲದೆ ತೆಗೆದುಕೊಳ್ಳಬಹುದು.
  2. ಈ ಪರೀಕ್ಷೆಗಳಿಗಾಗಿ ವಿದ್ವಾಂಸರ ಸಹಾಯದಿಂದ ವೈಜ್ಞಾನಿಕವಾಗಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ. ಈ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಲ್ಲಿ ಸಂಸ್ಕೃತಭಾಷೆಯನ್ನು ಓದಿ ಅರ್ಥೈಸಿಕೊಳ್ಳುವ ಮತ್ತು ಸಂಸ್ಕೃತದಲ್ಲಿ ಬರೆಯುವ ಸಾಮರ್ಥ್ಯವನ್ನು ಬೆಳೆಸಿ ಅವರನ್ನು ಸಂಸ್ಕೃತ ಸಾಹಿತ್ಯ ಮತ್ತು ಶಾಸ್ತ್ರಗಳ ಹೆಚ್ಚಿನ ಅಧ್ಯಯನಕ್ಕೆ ಪ್ರೇರಿಸುವಂತೆ ನಿರ್ಮಿತವಾಗಿವೆ.
  3. ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ರಜತ ಪದಕಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ.

 

Comments are closed.